ಕನ್ನಡ

ತೆರೆಯಲ್ಪಡು!

ಸೆಪ್ಟೆಂಬರ್ 5, 2021
ಸಾಮಾನ್ಯ ಕಾಲದ ಇಪ್ಪತ್ತಮೂರನೇ ಭಾನುವಾರ, ವರ್ಷ B
ಇಂದಿನ ವಾಚನಗಳು

ವೀಡಿಯೊ

“ಎಫ್ಫಥಾ!”— ಎಂದರೆ, “ತೆರೆಯಲ್ಪಡು!”  ಮಾರ್ಕ 7:34b

ಇವು ಶಕ್ತಿಯುತ ಮಾತುಗಳು.  ಇವು ಏಕೆ ಶಕ್ತಿಯುತವಾಗಿವೆ?  ಇವು ಕೇವಲ ಮಾತುಗಳಿಗಿಂತ ಮಿಗಿಲಾದವುಗಳಾಗಿರುವುದರಿಂದ ಶಕ್ತಿಯುತವಾಗಿವೆ.  ಇವು ತಾವು ಹೇಳುವುದನ್ನು ನಿಜವಾಗಿಯೂ ನೆರವೇರಿಸುವ ಮಾತುಗಳು.  ಕಿವುಡನೊಬ್ಬನನ್ನು ಗುಣಪಡಿಸುವಂತೆ ಬೇಡಿಕೊಂಡು ಯೇಸುವಿನ ಬಳಿಗೆ ಕರೆತಂದ ನಂತರ ಅವರು ಈ ಮಾತುಗಳನ್ನು ಹೇಳುತ್ತಾರೆ.  “ತೆರೆಯಲ್ಪಡು!” ಎಂದು ಆಜ್ಞಾಪಿಸಿದಾಗ, ಆ ಕಿವುಡನ ಕಿವಿಗಳು ತೆರೆಯುತ್ತವೆ ಮತ್ತು ಅವನ ಮಾತಿನ ತೊಡಕು ನಿವಾರಣೆಯಾಗುತ್ತದೆ.  

ಯೇಸು ಮಾತನಾಡುವಾಗ, ಅವರ ವಾಕ್ಯವು ಬದಲಾವಣೆಯನ್ನು ತರುತ್ತದೆ.  ಈ ಘಟನೆಯಲ್ಲಿ ಇದು ನಿಜವಾದಂತೆಯೇ ನಮ್ಮ ಜೀವನದಲ್ಲಿಯೂ ನಿಜವಾಗಿದೆ.  ನಾವು ಯಾವಾಗಲೂ ದೇವರ ಧ್ವನಿಯನ್ನು ಕೇಳಿಸಿಕೊಳ್ಳುವುದಿಲ್ಲ ಮತ್ತು ಯಾವಾಗಲೂ ಅವರ ವಾಕ್ಯವನ್ನೂ ಪ್ರೀತಿಯ ಮಾತುಗಳನ್ನೂ ಆಡುವುದಿಲ್ಲ ಎಂಬ ಅರ್ಥದಲ್ಲಿ ನಾವೆಲ್ಲರೂ ಕಿವುಡರಾಗಿದ್ದೇವೆ ಮತ್ತು ಮಾತಿನ ತೊಡಕಿನಿಂದ ಬಳಲುತ್ತಿದ್ದೇವೆ.  ಆದ್ದರಿಂದ ಯೇಸುವಿನ ಈ ಮಾತುಗಳು ನಮಗೂ ಹೇಳಲ್ಪಡಬೇಕು.  ಅವರು ನಮ್ಮನ್ನು ಒಬ್ಬಂಟಿಯಾಗಿ ಪ್ರಶಾಂತ ಸ್ಥಳಕ್ಕೆ ಕರೆದೊಯ್ದು ನಮ್ಮೊಂದಿಗೆ ಮಾತನಾಡಲು ನಾವು ಅವಕಾಶ ನೀಡಬೇಕು.  ಅವರು ನಮಗೆ ಈ ಮಾತುಗಳನ್ನು ಹೇಳಲು ಅವಕಾಶ ನೀಡಬೇಕು: “ಎಫ್ಫಥಾ!–ತೆರೆಯಲ್ಪಡು!”  

ನೀವು ಸರಿಯಾಗಿ ಕೇಳಿಸಿಕೊಳ್ಳದೆ ಇರುವುದು ಏನನ್ನು?  ದೇವರು ಬಹುಕಾಲದಿಂದ ನಿಮಗೆ ಹೇಳುತ್ತಿದ್ದರೂ ನೀವು ಕೇಳಿಸಿಕೊಳ್ಳಲು ನಿರಾಕರಿಸುತ್ತಿರುವುದು ಏನನ್ನು?  ಯಾವ ವಿಷಯಕ್ಕೆ ನೀವು ಕಿವುಡರಾಗಲು ನಿಮ್ಮನ್ನೇ ಬಿಟ್ಟುಕೊಟ್ಟಿದ್ದೀರಿ?  ನಮ್ಮ ಪ್ರಭು ನಿಮಗೆ ಹೇಳಲು ಬಯಸುವುದೆಲ್ಲವನ್ನೂ ನೀವು ಕೇಳಿಸಿಕೊಳ್ಳುವಂತೆ ನಿಮ್ಮ ಹೃದಯದ “ಕಿವಿಗಳನ್ನು” ತೆರೆಯಲು ಅವರಿಗೆ ಅವಕಾಶ ನೀಡಿ.  ಒಮ್ಮೆ ಹೀಗಾದಾಗ, ಯೇಸು ತಮ್ಮ ಸತ್ಯದ ಮತ್ತು ಪ್ರೀತಿಯ ಮಾತುಗಳನ್ನು ಆಡಲು ಸಹ ನಿಮಗೆ ನೆರವಾಗುವರು.  

ದೇವರ ಧ್ವನಿಯನ್ನು ಕೇಳಿಸಿಕೊಳ್ಳಲು ನೀವು ಎಷ್ಟು ಮುಕ್ತರಾಗಿದ್ದೀರಿ ಎಂಬುದನ್ನು ಇಂದು ಧ್ಯಾನಿಸಿ.  ಕೆಲವೊಮ್ಮೆ ನಾವೆಲ್ಲರೂ ಗಮನವಿಟ್ಟು ಕೇಳಿಸಿಕೊಳ್ಳಲು ಕಷ್ಟಪಡುತ್ತೇವೆ; ವಿಶೇಷವಾಗಿ ದೇವರ ಮಾತನ್ನು ಕೇಳಿಸಿಕೊಳ್ಳಲು ನಮಗೆ ಕಷ್ಟವಾಗಬಹುದು.  ನಮ್ಮ ಪ್ರಭುವಿನೊಂದಿಗೆ ಸ್ವಲ್ಪ ಸಮಯ ಏಕಾಂತದಲ್ಲಿ ಕಳೆಯಿರಿ ಮತ್ತು ಅವರು ನಿಮಗೆ ಹೇಳುತ್ತಿರುವುದೆಲ್ಲವನ್ನೂ ನೀವು ಕೇಳಿ ಅರ್ಥಮಾಡಿಕೊಳ್ಳುವಂತೆ ನಿಮ್ಮನ್ನು ಗುಣಪಡಿಸಲು ಅವರಿಗೆ ಅವಕಾಶ ನೀಡಿ.

ಪ್ರಭುವೇ, ನಾನು ಯಾವಾಗಲೂ ನಿನ್ನ ಮಾತಿಗೆ ಕಿವಿಗೊಡುವುದಿಲ್ಲ.  ನಾನು ನಿನ್ನನ್ನು ಇನ್ನಷ್ಟು ಸ್ಪಷ್ಟವಾಗಿ ಕೇಳಿಸಿಕೊಳ್ಳುವಂತೆ, ದಯವಿಟ್ಟು ನಿನ್ನ ಗುಣಪಡಿಸುವ ಮಾತುಗಳನ್ನು ನನಗೆ ಹೇಳು. ನಿನ್ನ ಮಾತನ್ನು ಕೇಳುವಾಗ, ನೀನು ಹೇಳಬೇಕೆಂದಿರುವ ಎಲ್ಲದಕ್ಕೂ ನಾನು ಕಿವಿಗೊಡುವಂತಾಗಲಿ.  ಯೇಸುವೇ, ನಾನು ನಿನ್ನಲ್ಲಿ ಭರವಸೆಯಿಡುತ್ತೇನೆ.

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಸಾಮಾನ್ಯ ಕಾಲಕ್ಕಾಗಿ ಪವಿತ್ರ ಗ್ರಂಥದ ಧ್ಯಾನಗಳು

ಎಲ್ಲ ಸಂತರು/ಹಬ್ಬಗಳು

ಇಂದಿನ ಸಂತರು – ಕಲ್ಕತ್ತಾದ ಸಂತ ಮಾತೆ ತೆರೇಸಾ—ಸ್ಮರಣೆ
ಈ ವರ್ಷ ಭಾನುವಾರದಂದು ಬರುವುದರಿಂದ ಇದನ್ನು ಆರಾಧನಾಕ್ರಮದ ಸ್ಮರಣೆಯಾಗಿ ಆಚರಿಸಲಾಗುವುದಿಲ್ಲ

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಮೇಲಿನ ವಿಶೇಷ ಚಿತ್ರ: ಪುಟ 55v: ಕಿವುಡ-ಮೂಕನ ಗುಣಪಡಿಸುವಿಕೆ, Mc 7:31-37, Wikimedia Commons ಮೂಲಕ


ಹೊಸದು!
ಸೆಪ್ಟೆಂಬರ್–ನವೆಂಬರ್ ತಿಂಗಳುಗಳ ಧ್ಯಾನಚಿಂತನೆಗಳು ಈಗ ಇ-ಪುಸ್ತಕ & ಪೇಪರ್‌ಬ್ಯಾಕ್ ರೂಪದಲ್ಲಿ ಲಭ್ಯವಿವೆ.

ಕ್ಯಾಥೊಲಿಕ್ ದೈನಂದಿನ ಧ್ಯಾನಚಿಂತನೆಗಳು
ಸಾಮಾನ್ಯ ಕಾಲ: ಸೆಪ್ಟೆಂಬರ್ 1–ನವೆಂಬರ್ 27, 2021

ಈ ಕೆಳಗಿನ ಮಾರಾಟಗಾರರಿಂದ ಇ-ಪುಸ್ತಕ & ಪೇಪರ್‌ಬ್ಯಾಕ್ ರೂಪದಲ್ಲಿ ಲಭ್ಯವಿದೆ:

Amazon ಪೇಪರ್‌ಬ್ಯಾಕ್ – Kindle – Google Play Books – iBooks – Barnes & Noble